ರಾಘವೇಂದ್ರ ಪಾಟೀಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿರುವ ’ತೇರು’ (೨೦೦೩) ಅವರ ಸಾಹಿತ್ಯದ ಬಹು ಮುಖ್ಯ ಸೃಷ್ಟಿಗಳಲ್ಲಿ ಒಂದಾಗಿದೆ. ಪಾಟೀಲರ ’ದೇಸಗತಿ’, ’ಕರೀಟೊಪಗಿ’ ಮುಂತಾದ ಕಥೆಗಳಲ್ಲಿ ಚಿತ್ರಿತವಾದ, ಊಳಿಗಮಾನ್ಯ ಪದ್ಧತಿಯ ಪಳೆಯುಳಿಕೆಗಳು ಇನ್ನೂ ಉಸಿರೆಳೆಯುತ್ತಿರುವ ಜೀವನ ವ್ಯವಸ್ಥೆಯಲ್ಲಿಯೇ ’ತೇರು’ ಕೂಡ ಜನ್ಮ ತಾಳಿದೆ. ’ದೇಸಗತಿ’ ಕಥೆಯಲ್ಲಿ ಬಂದ ಧರಮನಟ್ಟಿ ದೇಸಗತಿಯ ಕಥೆಯ ಒಂದು ರೀತಿಯ ಮುಂದುವರಿಕೆ ಈ ಕೃತಿಯಲ್ಲಿದೆ ಎನ್ನಬಹುದು.
Read Moreವ್ಯಕ್ತಿ, ಸಮುದಾಯ, ಚರಿತ್ರೆ ಇವುಗಳ ಕೂಡು ಬಿಂದುವಿನಲ್ಲಿ ಬದುಕಬೇಕಾಗಿ ಬರುವ ಮಾನವರ ನಾನಾ ನೆಲೆಗಳನ್ನು ಕಾಣಿಸುವ ಪ್ರಯತ್ನಗಳೇ ರಾಘವೇಂದ್ರ ಪಾಟೀಲರ ಕಥೆಗಳ ಸ್ಥಾಯಿ ಶ್ರುತಿ. ಪಾಟೀಲರಿಗೆ ಅಂತಹ ಶ್ರುತಿ ಮನುಷ್ಯ ಭಾವನೆಗಳ ಒಳದನಿಗಳೊಡನೆ ಹೊಂದಿಕೆಯಾದರೆ ಸಾಕು. ಅವರ ಕತೆಗಳಲ್ಲಿ ಅಂತಹ ಒಳದನಿಗಳು ಹೊರಲೋಕದ ಸತ್ಯದೊಡನೆ ಹೇಗೋ ಒಂದು ಲಯವನ್ನು ಸಾಧಿಸುತ್ತವೆ. ಆ ಕೂಡು ಬಿಂದು ಪಾಟೀಲರ ನಿರಂತರ ಶೋಧದ ತಾತ್ವಿಕ ನೆಲೆ. ಆದ್ದರಿಂದಲೆ ಅದು ಸ್ಥಾಯಿ.
Read Moreಕಥನಕಾರರಾದ ರಾಘವೇಂದ್ರ ಪಾಟೀಲರು ಎಂಭತ್ತರ ದಶಕದಲ್ಲಿ ಉದಯವಾಣಿಯ ದೀಪಾವಳಿ ಕಥಾಸ್ಪರ್ಧೆಗೆ ಬರೆದು, ಪ್ರಥಮ ಬಹುಮಾನ ಪಡೆದ ಮೊದಲ ಕಥೆ ಇದು. ಕರ್ನಾಟಕದಲ್ಲಿ ದಲಿತ ಬಂಡಾಯದ ಆಶಯಗಳ ಅಭಿವ್ಯಕ್ತಿಗೆ ಹೆಚ್ಚು ಪ್ರಾಶಸ್ತ್ಯವಿದ್ದ ಕಾಲವದು. ಕನ್ನಡ ಸಾಹಿತ್ಯದ ಸಂವೇದನೆಗಳು ಆದರ್ಶ ನೆಲೆಯಿಂದ, ಪ್ರಜ್ಞಾನೆಲೆಯಿಂದ, ಸಾಮಾಜಿಕ ನೆಲೆಗೆ Shiಜಿಣ ಆದ ಸಂದರ್ಭವದು. ಇಂತಹ ಒತ್ತಡದ ಮಧ್ಯೆ ಕಥೆಯನ್ನು ಬರೆಯಲು ಆರಂಭಿಸಿದ ರಾಘವೇಂದ್ರ ಪಾಟೀಲರು ನವ್ಯ ತಂತ್ರ ವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅಥವಾ ನವ್ಯೋತ್ತರದ ಸಾಮಾಜಿಕ ಪಠ್ಯಗಳಿಗೆ
Read More