ಪ್ರಶಸ್ತಿ ಪುರಸ್ಕಾರಗಳು

ನನಗೆ ಸಂದ ಗೌರವ

    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-೨೦೦೫, ತೇರು ಕಾದಂಬರಿಗೆ
ತೇರುಕಾದಂಬರಿಯುಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಮೈಸೂರು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಮ್., ಬಿ.ಎಸ್‌ಸಿ. ಮೊದಲ ವರ್ಷದ ಪಠ್ಯಪುಸ್ತಕವಾಗಿದ್ದಿತು.
ತೇರುಕಾದಂಬರಿಯ ಬಗೆಗೆ ಡಾ. ಸುರೇಶ ಹನಗಂಡಿಯವರು ವಿಶೇಷ ಅಧ್ಯಯನ ನಡೆಸಿ ಕನ್ನಡ ವಿಶ್ವವಿದ್ಯಾಲಯ ಹಂಪಿದಿಂದ ಎಂ.ಫಿಲ್., ಪದವಿ ಪಡೆದಿದ್ದಾರೆ. ಅವರ ಪ್ರಬಂಧವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ.
ರಾಘವೇಂದ್ರ ಪಾಟೀಲರ ಸಮಗ್ರ ಸಾಹಿತ್ಯ ವಿಷಯವನ್ನಿಟ್ಟುಕೊಂಡು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಡಿಯಲ್ಲಿ, ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಡಿ. ವಿಜಯಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಕುಮಾರಿ ಜಿ. ಎಸ್. ಭಾರ್ಗವಿಯವರು ಪಿ.ಎಚ್‌ಡಿ.,ಗಾಗಿ ಪ್ರೌಢ ಪ್ರಬಂಧವನ್ನು ರಚಿಸುತ್ತಿದ್ದು ಅದು ಇದೇ ಫೆಬ್ರುವರಿ ೨೦೨೦ರಲ್ಲಿ ಸಲ್ಲಿಸಲ್ಪಡುತ್ತಿದೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-೧೯೯೮-ಮಾಯಿಯ ಮುಖಗಳು ಕಥಾ ಸಂಕಲನಕ್ಕೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-೨೦೦೩-ತೇರು ಕಾದಂಬರಿಗೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪಿ. ಶ್ರೀನಿವಾಸ ರಾವ್ ದತ್ತಿ ಬಹುಮಾನ, ‘ಎದೆಗೆ ಎದೆ ಮಿಡಿತ’ ವಿಮರ್ಶಾ ಸಂಕಲನಕ್ಕೆ
ಕಾರಂತ ಪುರಸ್ಕಾರ-ದೇಸಗತಿ ಕಥಾಸಂಕಲನಕ್ಕೆ
ಚದುರಂಗ ಪ್ರಶಸ್ತಿ-ಮಾಯಿಯ ಮುಖಗಳು ಕಥಾ ಸಂಕಲನಕ್ಕೆ
ವರ್ಧಮಾನ ಪ್ರಶಸ್ತಿ-ಮಾಯಿಯ ಮುಖಗಳು ಕಥಾ ಸಂಕಲನಕ್ಕೆ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ-ದೇಸಗತಿ ಕಥಾಸಂಕಲನಕ್ಕೆ
ಉದಯವಾಣಿ ಕಥಾ ಸ್ಪರ್ಧೆಯ ಪ್ರಥಮ ಬಹುಮಾನ-ಒಡಪುಗಳು ಕಥೆಗೆ
ಪ್ರಜಾವಾಣಿ ಕಥಾ ಸ್ಪರ್ಧೆಯ ಪ್ರಥಮ ಬಹುಮಾನ-ಪ್ರತಿಮೆಗಳು ಕಥೆಗೆ
ಸುಧಾ, ಯುಗಾದಿ ಕಾದಂಬರಿ ಸ್ಪರ್ಧೆ ಮೆಚ್ಚುಗೆಯ ಬಹುಮಾನ-ಕಳಕೊಂಡವರು (ಬಾಳವ್ವನ ಕನಸುಗಳು) ಕಾದಂಬರಿಗೆ
ಬೆಳಗಾಂ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ ಎರಡು ಸಲ -ದೇಸಗತಿ ಮತ್ತು ತೇರು ಕೃತಿಗಳಿಗೆ
ಹಂಸಭಾವಿಯ ವಿಶ್ವನಾಥ ವಾರಂಬಳ್ಳಿಯ ಪ್ರಶಸ್ತಿ-ಮಾಯಿಯ ಮುಖಗಳು ಕೃತಿಗೆ
ಗುಳೇದಗುಡ್ಡದ ಡಾ|| ಬಸು ಪಟ್ಟೇದ್ ಪ್ರಶಸ್ತಿ - ಮಾಯಿಯ ಮುಖಗಳು ಕೃತಿಗೆ
ಹುನಗುಂದದ ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ-ದೇಸಗತಿ ಕೃತಿಗೆ
ಆರ್ಯಭಟ ಪ್ರಶಸ್ತಿ-ದೇಸಗತಿ ಕಥಾ ಸಂಕಲನಕ್ಕೆ
ರಂಗಶ್ರೀ ಪ್ರಶಸ್ತಿ ೨೦೦೮, ಬೆಂಗಳೂರು, ಒಟ್ಟು ಸಾಧನೆಗೆ
ಧಾರವಾಡದ ಗಳಗನಾಥ ಪ್ರಶಸ್ತಿ ೨೦೧೪, ಒಟ್ಟು ಸಾಧನೆಗೆ
ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಬೆಳಗಾವಿಯ ಸಮ್ಮೇಳನದಲ್ಲಿ ವಿಶೇಷ ಸನ್ಮಾನ, ೨೦೧೫.
೩ ಬಾರಿ ಡೈರೆಕ್ಟರ್ ಜನರಲ್ ಎನ್.ಸಿ.ಸಿಯವರಿಂದಎನ್.ಸಿ.ಸಿ. ಆಫೀಸರ‍್ಸ್ ಪ್ರಿ ಕಮಿಶನ್ ಉತ್ತಮ ಸ್ಥಾನ ಗಳಿಸಿದ್ದಕ್ಕಾಗಿ ಮತ್ತು ರಿಫ್ರೆಶರ್ ಕೋರ್ಸ್‌ಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಸಾಧನೆಗಾಗಿ, ಅಭಿನಂದನೆಯ ಪತ್ರ
೨೦೨೦ರ ಫೆಬ್ರುವರಿಯಲ್ಲಿ ಏರ್ಪಡುತ್ತಿರುವ ಅಖಿಲ ಭಾರತ ೮೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
ಸಂದೇಶ ಸಾಹಿತ್ಯ ಪ್ರಶಸ್ತಿ ಫೆಬ್ರವರಿ ೨೦೨೩