ನನ್ನನ್ನು ಕುರಿತು

ನನ್ನವರ ಅಭಿಪ್ರಾಯಗಳು

ನಾನು ಕಂಡಂತೆ- ಶ್ರೀ ರಾಘವೇಂದ್ರ ಪಾಟೀಲ

-ಬೆಳಗೆರೆ ಕೃಷ್ಣಶಾಸ್ತ್ರಿ

೫೦ನೇ ದಶಕದಲ್ಲಿ ನಾನು ಲಕ್ಷ್ಮೀಶ ಕವಿಯ ಹುಟ್ಟೂರಾದ ಕಡೂರು ತಾಲ್ಲೂಕು ದೇವನೂರಿನಲ್ಲಿ ಉಪಾಧ್ಯಾಯವಾಗಿ ಇದ್ದೆ. ಆ ದಿನಗಳಲ್ಲಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸ್ಥಾಪಕರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಮತ್ತು ಶ್ರೀ ಸೂರದಾಸ್‌ರವರು ದೇವನೂರಿಗೆ ಭಿಕ್ಷಾಟನೆಗಾಗಿ ಬಂದಿದ್ದರು. ಮತ್ತಷ್ಟು

Lazy genius ನಂತೆ ಕಾಣುವ ನಮ್ಮ ರಾಘೂ ಕಾಕಾ

-ಡಾ. ಸಂಕೇತ್ ಪಾಟೀಲ

ನಾವು ಬೆಟಗೇರಿಯ ಗಂಡಸರು ಬಹಳೇ ಆಲಸಿಗಳೆಂದು ಪ್ರತೀತಿ ಮೊದಲಿನಿಂದಲೂ ಇದೆ. ಮುಂಜಾನೆ ಎಷ್ಟೇ ಬೇಗ ಎದ್ದರೂ ಅದರ ಮುಂದಿನ ಕಾರ್ಯಕ್ರಮಗಳು ತಾಸುಗಟ್ಟಲೆ ನಡೆಯುತ್ತವೆ. ಮನೆಯ ಹೆಂಗಸರ ಸತತ ಒತ್ತಡ ಪ್ರಯತ್ನಗಳಿಗೆ ಮಣಿಯದೆ ಆರಾಮಶೀರ ವರ್ತಮಾನ ಪತ್ರಿಕೆ ಓದುತ್ತ, ಹರಟೆ ಹೊಡೆಯುತ್ತ, ವಾದ ವಿವಾದ ನಡೆಸುತ್ತ ಕೂತು ಬಿಡುತ್ತೇವೆ.ಮತ್ತಷ್ಟು

ಅಣ್ಣ ರಾಘಣ್ಣ

-ವಿಜಯೇಂದ್ರ ಪಾಟೀಲ್

ಸುಮಾರು ೩೦ ವರ್ಷಗಳ ಹಿಂದೆ ನಮ್ಮ ಚಿಕ್ಕಪ್ಪ ಡಾ| ಬೆಟಗೇರಿ ಕೃಷ್ಣ ಶರ್ಮರನ್ನು ಕುರಿತು ಬೆಳುವಲ ಎಂಬ ಅಭಿನಂದನ ಗ್ರಂಥ ಹೊರಬಂದಿತ್ತು. ಅದಕ್ಕಾಗಿ ನಮ್ಮ ತಂದೆ ದಿ| ಬಲರಾಮಪ್ಪ ಪಾಟೀಲರು ನನ್ನ ತಮ್ಮ ಈಶ ಎಂಬ ಒಂದು ಸುಧೀರ್ಘ ಲೇಖನವನ್ನು ಬರೆದಿದ್ದರು. ಮತ್ತಷ್ಟು

ನಕ್ಷತ್ರ ಚುಕ್ಕಿಗಳ ಛಂದಸ್ಸಿನ ಚಂದ್ರಮ

-ಶ್ರೀಧರ ಬಳಗಾರ

ವಿಸ್ತಾರವಾದ ಸುಖದ ಆಯಾಸದಲ್ಲಿ ಸಹ್ಯಾದ್ರಿಯಿಂದ ಜಿಗಿದು ಲವಲವಿಕೆಯ ಜೀವನದಿ ಚೆಲುವೆ ಶರಾವತಿ ಗರತಿಯಾಗಿ ಸಮುದ್ರ ಸೇರುವಲ್ಲಿ ವಿದಾಯ ಹೇಳಲು ನಿಂತ ಕಾಸರಗೋಡು ಎಂಬ ಪುಟ್ಟ ಊರಿದೆ. ತೆರೆಗಳ ಉಸಿರಿಗೆ ಶೃತಿ ಹಿಡಿದು ಸುಂಯ್‌ಗುಡುವ ಗಾಳಿ ಮರಗಳು ಒಂದೆಡೆಯಾದರೆ ನದಿ ತೀರದುದ್ದಕ್ಕೆ ರಾತ್ರಿಯಿಡೀ ಮತ್ತಷ್ಟು

 

ಲೇಖನ ಓದಲು ಹೆಸರುಗಳ ಮೇಲೆ ಕ್ಲಿಕ್ ಮಾಡಿ

ಡಾ.ಚಿಂತಾಮಣಿ ಕೊಡ್ಲೆಕೆರೆ   ಎಚ್ಚೆಸ್ವಿ    ಓ.ಎಲ್. ನಾಗಭೂಷಣ ಸ್ವಾಮಿ   ರಾಜಾರಾಮ ಹೆಗಡೆ    ಪ್ರಭಾಕರ ಮಳಿಯ

 

ಕನ್ನಡದ ಚೇತನಗಳು ಕಂಡಂತೆ ರಾಘವೇಂದ್ರ ಪಾಟೀಲರು - ಓದಲು ಕ್ಲಿಕ್ ಮಾಡಿ

ನನ್ನನ್ನು ಕುರಿತ

ಪುಸ್ತಕ ಮತ್ತು ಸಂಶೋಧನೆ

ರಾಘವೇಂದ್ರ ಪಾಟೀಲ

ಲೇ : ಡಾ. ಚಿಂತಾಮಣಿ ಕೊಡ್ಲೆಕೆರೆ , 2012

ಕವಿಯಾಗಿ, ವಿಮರ್ಶಕರಾಗಿ ಹೆಸರು ಮಾಡಿರುವ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ರಾಘವೇಂದ್ರ ಪಾಟೀಲರನ್ನು ಕುರಿತ ಈ ಗ್ರಂಥವನ್ನು ರಚಿಸಿಕೊಟ್ಟಿದ್ದಾರೆ. ಪಾಟೀಲರನ್ನು ಕುರಿತಂತೆ ಈವರೆಗೆ ಬಂದಿರುವ ವಿಮರ್ಶಾತ್ಮಕ ಬರಹಗಳನ್ನು ಗಣನೆಗೆ ತೆಗೆದುಕೊಂಡು ಆ ಹಿನ್ನೆಲೆಯಲ್ಲಿ ಕೃತಿಗಳ ವೈಶಿಷ್ಟ್ಯವನ್ನು ಮನವರಿಕೆ ಮಾಡಿಕೊಡುವ ಅವರ ವಿಧಾನ ಸಹೃದಯರ ಮೆಚ್ಚಿಕೆಯನ್ನು ಗಳಿಸಿಕೊಳ್ಳುತ್ತದೆ.

ತೇರು ಕಾದಂಬರಿ - ವಿವೇಚನೆ

-ಲೇ: ಸುರೇಶ ಹನಗಂಡಿ , 2009

`ತೇರು’ ಕೃತಿಯನ್ನು ವಿವೇಚಿಸಿದ ಹನಗಂಡಿ ಅವರ ಈ ಕೃತಿಯಲ್ಲಿ ಆರು ಅಧ್ಯಾಯಗಳಿವೆ.ಭಾಷೆ ಮತ್ತು ಶೈಲಿ ಎಂಬ ಅಧ್ಯಾಯವು ಹೊಸ ವಿಷಯವನ್ನು ಓದಿದ ಅನುಭವವಾಗುತ್ತಿದ್ದು ಕಾದಂಬರಿಕಾರರು ಸಮುದಾಯದ ಸಾಮಾಜಿಕ ಚಹರೆಯನ್ನು ಗುರುತಿಸಲು ತಮ್ಮ ಪರಿಸರದ ಭಾಷೆಯನ್ನು ಬಳಸಿಕೊಂಡ ಬಗೆಯನ್ನು ಲೇಖಕರು ಚನ್ನಾಗಿ ಗುರುತಿಸಿದ್ದಾರೆ...

ರಾಘವೇಂದ್ರ ಪಾಟೀಲರ ಸಮಗ್ರ ಸಾಹಿತ್ಯ

ಕನ್ನಡ ಪಿಎಚ್. ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿದ ಸಂಶೋಧನಾ ಮಹಾಪ್ರಬಂಧ
ಸಂಶೋಧಕರು : ಭಾರ್ಗವಿ . ಜಿ. ಎಸ್
ಮಾರ್ಗದರ್ಶಕರು : ಡಾ. ಡಿ. ವಿಜಯಲಕ್ಷ್ಮಿ, ಮಹಾರಾಜ ಕಾಲೇಜು , ಮೈಸೂರು

ರಾಘವೇಂದ್ರ ಪಾಟೀಲರ ತೇರು ಕೃತಿಯು ನಾನು ಪದವಿಯಲ್ಲಿದ್ದಾಗ ಪಠ್ಯಪುಸ್ತಕವಾಗಿತ್ತು. ಅಂದಿನಿಂದ ಪಾಟೀಲರ ಸಾಹಿತ್ಯದ ಬಗೆಗೆ ವಿಶೇಷ ಆಸಕ್ತಿ ಹುಟ್ಟಿ, ಆ ಆಸಕ್ತಿಯು ಸಂಶೋಧನೆಯ ಹಂತವನ್ನು ತಲುಪಿತು. - ಬಾರ್ಗವಿ ಜಿ. ಎಸ್.

ಪ್ರಸ್ತುತಿ - ರಾಘವೇಂದ್ರ ಪಾಟೀಲರ ವ್ಯಕ್ತಿತ್ವ ಮತ್ತು ಸಾಹಿತ್ಯ

ಸಂಪಾದಕರು
ಪ್ರೊ. ಚಂದ್ರಶೇಖರ ತಾಳ್ಯ
ಪ್ರೊ. ಮಲ್ಲಿಕಾರ್ಜುನ ಹಿರೇಮಠ
ಶ್ರೀ. ವಿಜಯೇಂದ್ರ ಪಾಟೀಲ

`ಪ್ರಸ್ತುತಿ’ಯ ಈ ಅಭಿನಂದನಾ ಸಂಚಿಕೆಗೆ ನಾಡಿನ ಗಣ್ಯಾತಿಗಣ್ಯ ಲೇಖಕರು ಪಾಟೀಲರ ಕೃತಿಗಳನ್ನು ಕುರಿತು ಗಂಭೀರವಾಗಿ ಸ್ಪಂದಿಸಿದ್ದಾರೆ. ಅವರನ್ನು ಬಲ್ಲ ಗೆಳೆಯರು ಒಡನಾಟವನ್ನು ಆತ್ಮೀಯವಾಗಿ ಹೇಳಿಕೊಂಡಿದ್ದಾರೆ. ಅವರ ಬಂಧುಗಳು ಸಹಜವಾಗಿ ಹೆಮ್ಮೆ ಪಟ್ಟುಕೊಳ್ಳುತ್ತಾ ಹೆಮ್ಮೆಯನ್ನು ಹಂಚಿಕೊಂಡಿದ್ದಾರೆ. ಈ ಎಲ್ಲ ಸ್ಪಂದನಗಳಿಗೂ ಭಾಜನರಾಗಿರುವ ರಾಘವೇಂದ್ರ ಪಾಟೀಲ ನಿಜವಾದ ಮೌಲಿಕತೆಯನ್ನು ಸಾಧಿಸಿದ್ದಾರೆ...